ಗೌಪ್ಯತೆ

ಖಾತೆ ಇಲ್ಲ, ಜಾಹೀರಾತು ಇಲ್ಲ. ನೀವು ಉಳಿಸಿದ್ದು ನಿಮ್ಮ ಸಾಧನದಲ್ಲೇ ಇರುತ್ತದೆ.

ಸಿರಿಗನ್ನಡ (sirigannada.in ಮತ್ತು Google Playನ ಆ್ಯಪ್) ದೇವರಾಜ್ ಕೆ (Devaraj K) ನಿರ್ವಹಿಸುವ ಮುಕ್ತ ಆಕರ ಯೋಜನೆ. ಕೊನೆಯ ಪರಿಷ್ಕರಣೆ: 22 ಸೆಪ್ಟೆಂಬರ್ 2026.

ನಿಮ್ಮ ಸಾಧನದಲ್ಲೇ ಉಳಿಯುವುದು

ಇಷ್ಟದ ಪದಗಳು, ಸಂಗ್ರಹಗಳು, ಟಿಪ್ಪಣಿಗಳು, ಓದಿದ ಜಾಗ, ಆಟದ ಪ್ರಗತಿ, ಆಯ್ಕೆಗಳು ಮತ್ತು ಆಫ್‌ಲೈನ್‌ಗೆ ಇಳಿಸಿದ ಪುಸ್ತಕ-ಕಥೆಗಳು ಈ ಬ್ರೌಸರ್‌ನ ಸಂಗ್ರಹದಲ್ಲಿ ಮಾತ್ರ ಇರುತ್ತವೆ. ಅವು ನಮಗೆ ಅಥವಾ ಬೇರೆ ಯಾರಿಗೂ ಹೋಗುವುದಿಲ್ಲ. ತಾಣದ ದತ್ತಾಂಶ ಅಳಿಸಿದರೆ ಅವೂ ಅಳಿಯುತ್ತವೆ.

ಇನ್ನೊಂದು ಸಾಧನದಲ್ಲಿ ಮುಂದುವರಿಸುವುದು

ಆ ಕೊಂಡಿ ಅಥವಾ QR ನಿಮ್ಮ ಪ್ರಗತಿಯನ್ನು ಕೊಂಡಿಯೊಳಗೇ ಒಯ್ಯುತ್ತದೆ; ಏನೂ ಅಪ್‌ಲೋಡ್ ಆಗುವುದಿಲ್ಲ. ನೀವು ಕೊಂಡಿ ಕೊಟ್ಟವರು ಮಾತ್ರ ಅದನ್ನು ನೋಡಬಹುದು.

ಭೇಟಿಗಳ ಅಂಕಿಅಂಶ

ಈ ತಾಣದಲ್ಲಿ ಯಾವುದೇ ಅಂಕಿಅಂಶ ಸ್ಕ್ರಿಪ್ಟ್ ಇಲ್ಲ, ಕುಕೀಗಳೂ ಇಲ್ಲ. ತಾಣವನ್ನು ಒದಗಿಸುವ Cloudflare ತನ್ನ ಸರ್ವರ್ ದಾಖಲೆಗಳಿಂದ ಭೇಟಿಗಳನ್ನು ಒಟ್ಟು ಮೊತ್ತವಾಗಿ ಮಾತ್ರ ಎಣಿಸುತ್ತದೆ: ಕೇಳಿದ ಪುಟಗಳು, ದೇಶ ಮತ್ತು ಬ್ರೌಸರ್‌ನ ಬಗೆ. ಯಾವುದೇ ಜಾಲ ಸರ್ವರ್‌ನಂತೆ, ಪುಟ ಕಳುಹಿಸಲು ಅದಕ್ಕೆ ನಿಮ್ಮ ನೆಟ್‌ವರ್ಕ್ ವಿಳಾಸ ಕಾಣುತ್ತದೆ.

Android ಆ್ಯಪ್

Google Playನ ಸಿರಿಗನ್ನಡ ಆ್ಯಪ್ ಇದೇ ತಾಣವನ್ನು Chromeನಲ್ಲಿ ತೆರೆಯುತ್ತದೆ, ಹಾಗಾಗಿ ಮೇಲಿನದೆಲ್ಲ ಅದಕ್ಕೂ ಅನ್ವಯಿಸುತ್ತದೆ. ಆ್ಯಪ್ ಯಾವ ಅನುಮತಿಯನ್ನೂ ಕೇಳುವುದಿಲ್ಲ, ತನ್ನದೇ ಆಗಿ ಯಾವ ಮಾಹಿತಿಯನ್ನೂ ಸಂಗ್ರಹಿಸುವುದಿಲ್ಲ.

ಸಂಪರ್ಕ ಮತ್ತು ಹೊರಗಿನ ಕೊಂಡಿಗಳು

ಸಂಪರ್ಕ ಫಾರ್ಮ್ ಮೂಲಕ ಕಳುಹಿಸಿದ ಸಂದೇಶ Google Formsಗೆ, GitHub ಬರಹಗಳು GitHubಗೆ ಹೋಗುತ್ತವೆ; ಅವುಗಳಿಗೆ ಅವುಗಳದೇ ಗೌಪ್ಯತಾ ನೀತಿ ಇದೆ. ಉತ್ತರ ಬೇಕಿದ್ದರೆ ಮಾತ್ರ ಇಮೇಲ್ ಕೊಡಿ. Instagram, X, ವಿಕಿಸೋರ್ಸ್‌ನಂತಹ ಹೊರಗಿನ ತಾಣಗಳ ಕೊಂಡಿಗಳು ಅವುಗಳ ನಿಯಮಗಳಿಗೆ ಒಳಪಡುತ್ತವೆ.

ಮಕ್ಕಳು

ಮಕ್ಕಳು ಖಾತೆ ಇಲ್ಲದೆ ತಾಣದ ಎಲ್ಲ ಭಾಗಗಳನ್ನು ಬಳಸಬಹುದು. ನಾವು ಹೆಸರು, ವಯಸ್ಸು ಅಥವಾ ಸಂಪರ್ಕ ವಿವರ ಕೇಳುವುದಿಲ್ಲ; ಮಗು ಉಳಿಸಿದ್ದು ಸಾಧನದಿಂದ ಹೊರಹೋಗುವುದಿಲ್ಲ.

ಬದಲಾವಣೆಗಳು ಮತ್ತು ಪ್ರಶ್ನೆಗಳು

ಈ ನೀತಿ ಬದಲಾದರೆ ಇದೇ ಪುಟ ಮತ್ತು ದಿನಾಂಕ ಬದಲಾಗುತ್ತದೆ; ಹಿಂದಿನ ಆವೃತ್ತಿಗಳು GitHubನಲ್ಲಿ ಇವೆ. ಪ್ರಶ್ನೆ ಇದ್ದರೆ ಸಂಪರ್ಕ ಪುಟ ಬಳಸಿ.

ಸಂಪರ್ಕ